Welcome to Dhwani Trust

ಹುಡುಕಿ

 

ಚಿತ್ರಣ

ಚಿತ್ರಣ ಯೋಜನೆಯಡಿ ಧ್ವನಿ ಬಳಗ ಸ್ವತಃ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಗಳಿಗೆ ಪ್ರವಾಸ ಮಾಡಿ, ಅಲ್ಲಿಯ ಸ್ಥಳ ವೀಕ್ಷಣೆಯನ್ನು ಕೂಲಂಕಷವಾಗಿ ಕೈಗೊಂಡು ಮತ್ತು ಶೋಧಿಸಿ ನೈಜವಾದ ಹಾಗೂ ನೇರವಾದ ಅನುಭವ ಪಡೆದುಕೊಳ್ಳುತ್ತದೆ. ಈ ಯೋಜನೆ 2004 ರಲ್ಲಿ ಪ್ರಾರಂಭವಾಯಿತು. ಕರ್ನಾಟಕದಲ್ಲಿನ ಬಹುತೇಕ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳಿಗೆ ನಾವು ಈಗಾಗಲೇ ಭೇಟಿ ನೀಡಿದ್ದೇವೆ. ಈಗ ತಮಿಳು ನಾಡಿನ ಇತಿಹಾಸ ಮತ್ತು ಪಾರಂಪರಿಕ ಮಹತ್ವದ ಸ್ಥಳಗಳನ್ನು ಆಯ್ಕೆಮಾಡಿಕೊಂಡು, ಪಲ್ಲವರು ಮತ್ತು ಚೋಳರ ಕಾಲದಲ್ಲಿ ಪ್ರಮುಖವಾದ ಸ್ಥಳಗಳಿಗೆ ಅಧ್ಯಯನ ಭೇಟಿ ನೀಡಿದ್ದೇವೆ. ಇದುವರೆಗಿನ ಪ್ರವಾಸಗಳಿಂದ ನಮ್ಮಲ್ಲಿ 11000 ಕ್ಕೂ ಹೆಚ್ಚು ಚಿತ್ರಗಳು ಸಂಗ್ರಹವಾಗಿವೆ. ನಮ್ಮ ಅನುಭವಗಳು, ಕಲಿಕೆಗಳು ಮತ್ತು ಚಿತ್ರಗಳು ಪೂರಣ ಮತ್ತು ಆರಂಭ ಯೋಜನೆಯಡಿ ರೂಪಿತವಾಗುವ ಸಂಪನ್ಮೂಲಗಳಲ್ಲಿಯೂ, ವಿಧಾನಗಳಲ್ಲಿಯೂ ಉಪಯೋಗವಾಗುತ್ತವೆ.

 

 

 
 
 
ಯೋಜನೆಗಳು