Welcome to Dhwani Trust

ಹುಡುಕಿ

 

ನಮ್ಮ ಬಗ್ಗೆ

ಧ್ವನಿ ಶೈಕ್ಷಣಿಕ ಸ೦ಪನ್ಮೂಲ ಕೇ೦ದ್ರವನ್ನು ಶಿವಾನ೦ದ ಹೊ೦ಬಳ ಅವರು 2001 ರಲ್ಲಿ ಪ್ರಾರ೦ಭಿಸಿದರು. ಶಿವಾನ೦ದ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 30 ವರ್ಷ ಶಿಕ್ಷಕರಾಗಿಯೂ, ಸ೦ಪನ್ಮೂಲ ವ್ಯಕ್ತಿಯಾಗಿಯೂ ಹಾಗೂ ನವನಿರ್ಮಿತಿಕಾರನಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯನ್ನು ಬಲಗೊಳಿಸುವ ಸಹಜ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಹಾಗು ಸಮಾಜ ವಿಜ್ಞಾನ ಬೋಧನೆಗೆ ಸ೦ಬ೦ಧಿಸಿದ೦ತೆ ಹಲವಾರು ನವೀನ ಕಲಿಕಾ ಸಾಧನ ಹಾಗೂ ವಿಧಾನಗಳನ್ನು ಇವರು ವಿನ್ಯಾಸಗೊಳಿಸಿದ್ದಾರೆ. ಶ್ರೀಯುತರು 1 ರಿ೦ದ 7ನೇ ತರಗತಿಗಳಿಗೆ ಬರೆದ ಪೂರಕ ಪುಸ್ತಕಗಳನ್ನು ಒರಿಯ೦ಟ್ ಲಾ೦ಗ್ಮನ್ ಸ೦ಸ್ಥೆ ಪ್ರಕಟಿಸಿದೆ. 2003ರಲ್ಲಿ ಇವರು ಶಿಕ್ಷಣದಲ್ಲಿ ಐಸಿಟಿಗೆ ಸ೦ಭಧಿಸಿದ ಯೋಜನೆಯೊ೦ದರಲ್ಲಿ ತರಬೇತುದಾರರಾಗಿಯೂ, ನಿರ್ವಹಣೆಗಾರರಾಗಿಯೂ ಭಾಗವಹಿಸಿದ್ದರು.

ಕಾನೂನಾತ್ಮಕ ಸ್ಥಾನಮಾನ

ಧ್ವನಿ ಟ್ರಸ್ಟ ಸೊಸೈಟಿ ಆಕ್ಟ 1961ರ ಪ್ರಕಾರ ಒ೦ದು ದತ್ತಿ ಸ೦ಸ್ಥೆ ಎ೦ದು ನೋಂದಿತವಾಗಿದ್ದು, 12-A ಸೌಲಭ್ಯವನ್ನು ಪಡೆದುಕೊಂಡಿದೆ. ಆದಾಯ ತೆರಿಗ ಕಾನೂನಿನ 80-ಜಿ ಭಾಗದ ಅನುಗುಣವಾಗಿ ದಾನಿಗಳು ಮಾಡಿದ ಸಹಾಯಕ್ಕೆ ಅವರು ಆದಾಯ ಕರ ಕಟ್ಟಬೇಕಾಗಿಲ್ಲ. ಧ್ವನಿ ಸಂಸ್ಥೆಯು FCRA ಅಡಿಯಲ್ಲಿ ನೋಂದಿತವಾಗಿದ್ದು ವಿದೇಶಿ ಹಣವನ್ನು ಸ್ವೀಕರಿಸಲು ಅರ್ಹತೆ ಪಡೆದುಕೊಂಡಿದೆ.

ಆಡಳಿತ ಮ೦ಡಳಿ ಸದಸ್ಯರು

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಆಡಳಿತ ಮಂಡಳಿ:

ಶ್ರೀ ಶಿವಾನ೦ದ ಹೊ೦ಬಳ - ನಿರ್ದೇಶಕರು
ಡಾ. ಎಸ್. ಎನ್. ಗಣನಾಥ - ನಿರ್ದೇಶಕರು, ಸುವಿದ್ಯಾ ಶೈಕ್ಷಣಿಕ ಸ೦ಪನ್ಮೂಲ ಸ೦ಸ್ಥೆ, ಬೆ೦ಗಳೂರು, ಕರ್ನಾಟಕ
ಡಾ. ಬಸವರಾಜ ಕಲ್ಗುಡಿ - ವಿಮರ್ಶಕರು ಹಾಗು ಕನ್ನಡ ಪ್ರಾಧ್ಯಾಪಕರು, ಬೆ೦ಗಳೂರು ವಿಶ್ವವಿದ್ಯಾನಿಲಯ
ಶ್ರೀ. ಪ್ರಭಾಕರ ಎಚ್. ಆರ್. - ಐಟಿ ಸಲಹೆಗಾರರು ಮತ್ತು ತರಬೇತುದಾರರು

ಧ್ವನಿ ಬಳಗ

ಶ್ರೀ ಶಿವಾನ೦ದ ಹೊ೦ಬಳ

ಶ್ರೀ ಶಿವಾನ೦ದ ಹೊ೦ಬಳ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 20 ವರ್ಷ ಶಿಕ್ಷಕರಾಗಿಯೂ, ಸ೦ಪನ್ಮೂಲ ವ್ಯಕ್ತಿಯಾಗಿಯೂ ಹಾಗೂ ನವನಿರ್ಮಿತಿಕಾರನಾಗಿಯೂ ಕೆಲಸ ಮಾಡಿದ್ದಾರೆ. ಇವರು ಸಾಕಷ್ಟು ನವೀನ ಕಲಿಕೆ ಸಾಧನಗಳನ್ನು ಮತ್ತು ಕನ್ನಡ ಹಾಗು ಸಮಾಜ ವಿಜ್ಞಾನ ಬೋಧನೆ ವಿಧಾನಗಳನ್ನು ವಿನ್ಯಾಸಗೊಳಿಸಿದ್ದಾರೆ.

ತರಬೇತುದಾರರಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಅನುಭವ
1. ವಿಶ್ವ ಬ್ಯಾಂಕ ಪ್ರಾಯೋಜಿತ ಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ಶೈಕ್ಷಣಿಕ ಯೋಜನೆಯಲ್ಲಿ ಸಂಪನ್ಮೂಲ ವ್ಯಕ್ತಿ
2. ಎನ್ ಜಿಒ ಮತ್ತು ಸಿಆರ್ ಪಿಗಳಿಗೆ ಕನ್ನಡ ಮತ್ತು ಇತಿಹಾಸ ವಿಷಯಗಳ ತರಬೇತಿ
3. "ಚಿನ್ನರ ಅಂಗಳ" ಯೋಜನೆಗಾಗಿ ಬೋಧನಾ ಕಲಿಕಾ ಸಾಮಗ್ರಿಗಳ ಸಿದ್ಧತೆ
4. ಸರಕಾರಿ ಶಾಲೆಯ ಶಿಕ್ಷಕರಿಗೆ 'ಶಿಕ್ಷಣದಲ್ಲಿ ಐಟಿ ಉಪಯೋಗ' ವಿಷಯದಲ್ಲಿ ತರಬೇತಿ

ಶಿಕ್ಷಕರಾಗಿ ಅನುಭವ

ಶಿವಾನ೦ದ ಅವರು 1985ರಿಂದ 1990ರ ವರೆಗೆ ಕನ್ನಡ ಉಪನ್ಯಾಸಕರಾಗಿದ್ದರು. ನ೦ತರ 10 ವರ್ಷಗಳ ಕಾಲ ಜಿಡ್ಡು ಕೃಷ್ಣಮೂರ್ತಿ ಅವರ ಬೆಂಗಳೂರಿನ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅನ೦ತರ ಬೆ೦ಗಳೂರಿನ ಗಿಫ್ಟೆಡ್ ಎಜ್ಯುಕೇಶನ್ ಹಾಗು ರಿಸರ್ಚ್ ಫೌ೦ಡೇಶನ್ ಶಾಲೆ ಹಾಗು ಮಲ್ಯ ಅದಿತಿ ಇ೦ಟರ್ನ್ಯಾಶನಲ್ ಶಾಲೆಗಳಲ್ಲಿಯೂ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ.

ಶಿವಾನ೦ದರ ಸೃಜನಾತ್ಮಕ ಸೃಷ್ಟಿ:

1. ಕನ್ನಡ ಬೋಧನೆ ವಿಧಾನ: ಕಥೆ, ಆಟ, ಚಟುವಟಿಕೆ ಮತ್ತು ಹಾಸ್ಯ ಲಘು ಕೃತಿಗಳನ್ನು ಉಪಿಯೋಗಿಸಿ ಬೋಧನೆ ಮಾಡುವ ವಿಧಾನ
2. ಶಾಲೆ ಮತ್ತು ಕಾಲೇಜುಗಳ ವಿಧ್ಯಾರ್ಥಿಗಳು ಪಾತ್ರವಹಿಸಿದ ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದಾರೆ
3. ಕನ್ನಡ ಭಾಷೆಯನ್ನು ಕಲಿಸಲು ಜಾನಪದ ಆಟ ಮತ್ತು ಪ್ರಾಸಗಳನ್ನು ಅಳವಡಿಸಿಕೊ೦ಡ ಒ೦ದು ಪ್ರಯೋಗ
4. ಸಾ೦ಸ್ಕೃತಿಕ ಕಾರ್ಯಕ್ರಮ ಮತ್ತು ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸುವುದು

ಪ್ರಕಟಣೆಗಳು

1. ಕನ್ನಡ ಕಸ್ತೂರಿ (ಆರಂಭಿಕ ಹಂತದ ಕನ್ನಡ ಕಲಿಯುವರಿಗೆ ಅಭ್ಯಾಸ ಪುಸ್ತಕ)
2. ಕನ್ನಡ ಚಟುವಟಿಕೆ ಪುಸ್ತಕಗಳು - ತರಗತಿ 1 ರಿ೦ದ 7 ರ ವರೆಗೆ (ಪ್ರಕಾಶಕರು - ಓರಿಯ೦ಟ ಲಾ೦ಗಮ್ಯಾನ್)
3. ಕಲಿ-ನಲಿ (ಪ್ರಕಾಶಕರು - ಡಿ.ಪಿ.ಇ.ಪಿ ಹಾಗು ಕನ್ನಡ ಪುಸ್ತಕ ಪ್ರಾಧಿಕಾರ)
4. ಕಲಿ-ನಲಿ - ಮಕ್ಕಳ ಭಿತ್ತಿ ಪತ್ರಿಕೆ ಸ೦ಪಾದಕ ಮ೦ಡಳಿಯಲ್ಲಿ ಭಾಗವಹಿಸಿದ್ದರು
5. ದೋಸೆ ಪಾಸೆ - ಶಿಶುಪ್ರಾಸಗಳುಳ್ಳ ಧ್ವನಿಸುರುಳಿ ಹಾಗು ಪುಸ್ತಕ
6. ಕನ್ನಡ ಕಲಿಕಾ ಮಾದರಿ ಪುಸ್ತಕವನ್ನು ನಿಯೋಜಿಸಿದ್ದಾರೆ. ಇದು ಅ೦ಕಿತ ಪ್ರಕಾಶಕರಿ೦ದ ಪ್ರಕಟಗೊ೦ಡಿದೆ

ರೇಡಿಯೋ ಮತ್ತು ದೂರದರ್ಶನ

1. ಉಚ್ಚ ಮಾಧ್ಯಮಿಕ ಶಾಲೆಯ ಹುಡುಗರಿಗೆ ಅನ್ವಯಿಸುವ೦ತಹ 13 ಸ೦ಚಿಕೆಯ ಮಿನುಗು ಮಿ೦ಚು ಶೈಕ್ಷಣಿಕ ಸ೦ಪನ್ಮೂಲ ಕಾರ್ಯಕ್ರಮವನ್ನು ನಿರ್ದೇಶಿಸಿ ಅನ್ವಯಗೊಳಿಸಿದ್ದಾರೆ
2. ಜೂನ್ 2000 ರಿ೦ದ ಮಾರ್ಚ್ 2002 ವರೆಗೆ ಉದಯ ಟಿವಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ ಕಾರ್ಯ ನಿರ್ವಹಿಸಿದ್ದಾರೆ

ಶ್ರೀ ರಾಘವನ್ ಶ್ರೀನಿವಾಸನ್

ಶ್ರೀ ರಾಘವನ್ ಶ್ರೀನಿವಾಸನ್ ರು 2004 ರಿಂದ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಯುತರು ಸಂಸ್ಥೆಯ ಎಲ್ಲ ಕೆಲಸಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಜೊತೆಗೆ ಸುಮಾರು 8 ವರ್ಷಗಳಿ೦ದ ವಿವಿಧ ಸ್ವಯ೦ಸೇವಾ ಸ೦ಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಇವರು ಈ ಸ೦ಸ್ಥೆಗಳ ಯೋಜನೆಗಳ ಪರಿಕಲ್ಪನೆ ಬೆಳೆಸುವ ಹಾಗೂ ಅವುಗಳನ್ನು ಕಾರ್ಯರೂಪಗೊಳಿಸುವವರೆಗೆ ನಾನಾ ವಿಧದ ಸಹಾಯವನ್ನು ಒದಗಿಸಿರುತ್ತಾರೆ. ಶ್ರೀ ರಾಘವನ್ ತರಬೇತುದಾರರಾಗಿಯೂ, ಸಲಹೆಗಾರರಾಗಿಯೂ ಹಾಗು ನಿಧಿ ಸ೦ಗ್ರಹಣೆಯಲ್ಲಿ ಸಹಾಯ ಮಾಡಿದ್ದಾರೆ. ಇದಕ್ಕೂ ಮೊದಲು ಇವರು ಸುಮಾರು 16 ವರ್ಷ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನ ಪದವೀಧರರಾದ ಇವರು ಪ್ರಸಿದ್ಡ ಸಾಫ್ಟವೇರ್ ಸ೦ಸ್ಥೆಯೊಂದರಲ್ಲಿ ಹಿರಿಯ ನಿರ್ವಹಣೆಗಾರರಾಗಿಯೂ ಹಾಗು ವಿಭಾಗದ ಪ್ರಮುಖರಾಗಿಯೂ ಕೆಲಸ ಮಾಡಿದ್ದಾರೆ.

ಶ್ರೀ ಪ್ರಭಾಕರ ಎಚ್. ಆರ್

ಶ್ರೀ ಪ್ರಭಾಕರ್ ಅವರು ಧ್ವನಿ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರಾಗಿದ್ದಾರೆ. ಇದಲ್ಲದೇ ಅವರು ತಮ್ಮದೇ ಆದ ಐಟಿ ತರಬೇತಿ ಸಂಸ್ಥೆಯನ್ನು ನಡೆಸುತ್ತಿರುವರು. ಇದಕ್ಕೂ ಪೂರ್ವದಲ್ಲಿ ಅವರು ಸುಮಾರು 20 ವರ್ಷ ವಿವಿಧ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನದ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರು.

ಶ್ರೀ ಹರೀಶ ಆಮೂರ

ಶ್ರೀ ಹರೀಶ ಅವರು ಧ್ವನಿ ಸಂಸ್ಥೆಯ ತಂತ್ರಜ್ಞಾನ ಸಲಹೆಗಾರರು. ಇವರು ಧ್ವನಿಯ ವೆಬ್ ಸೈಟ್ ನ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೂ ಮೊದಲು ದೊಡ್ದ ಸಾಫ್ಟವೇರ್ ಸ೦ಸ್ಥೆಯಲ್ಲಿ 10 ವರ್ಷಗಳ ಕಾಲ ಕೆಲಸಮಾಡಿದ್ದಾರೆ.

 

 

 
 
 
ಯೋಜನೆಗಳು